ತಂತ್ರಜ್ಞಾನ ಆಧರಿತ ಕಲಿಕಾ ಕಾರ್ಯಕ್ರಮ (TALP) ಇದು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. 2016-17ನೇ ಸಾಲಿನಿಂದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ಶಿಕ್ಷಣ ಇಲಾಖೆಯಲ್ಲಿ ಜಾರಿಗೊಳಿಸಿದ್ದ ಎಜುಸ್ಯಾಟ್, ಟೆಲಿ ಶಿಕ್ಷಣ, ಐ.ಸಿ.ಟಿ. ಫೇಸ್-1, ಐ.ಸಿ.ಟಿ. ಫೇಸ್-2, ಐ.ಸಿ.ಟಿ. ಫೇಸ್-3, ಗಳನ್ನು “ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ”ದಡಿಯಲ್ಲಿ ವಿಲೀನಗೊಳಿಸಲಾಗಿದೆ. ಸದರಿ ಕಾರ್ಯಕ್ರಮದ ಒಂದು ಭಾಗವಾಗಿ “ಐ.ಟಿ.@ಸ್ಕೂಲ್ಸ್ ಇನ್ ಕರ್ನಾಟಕ” ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ.

 

ಈ ಸಂಬಧ 2016-17ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ಆಯ್ದ 48 ಪ್ರೌಢಶಾಲೆಗಳು, 2017-18ರಲ್ಲಿ 18 ಪ್ರೌಢಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಗಣಿತ, ವಿಜ್ಞಾನ ಸಮಾಜ ವಿಜ್ಞಾನ ಮತ್ತು ಆಂಗ್ಲ ಭಾಷಾ ಶಿಕ್ಷಕರುಗಳಿಗೆ 10 ದಿನಗಳ ಬುನಾದಿ ಮತ್ತು 10 ದಿನಗಳ TALP ತರಬೇತಿಯನ್ನು ನೀಡಲಾಗಿದೆ. 2018-19ರಲ್ಲಿ 25 ಪ್ರೌಢಶಾಲೆಗಳನ್ನು TALP ಅಡಿಯಲ್ಲಿ ಆಯ್ಕೆ ಮಾಡಲಾಗಿದ್ದು, ಈ ಶಾಲೆಗಳಲ್ಲಿನ ಶಿಕ್ಷಕರುಗಳಿಗೆ ಬುನಾದಿ ತರಬೇತಿಯನ್ನು ನೀಡಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಒಟ್ಟು 215 ಸರ್ಕಾರಿ ಪ್ರೌಢ ಶಾಲೆಗಳಿದ್ದು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಉಳಿದ 124 ಸಕಾರಿ ಪ್ರೌಢ ಶಾಲೆಗಳ ಶಿಕ್ಷಕರುಗಳಿಗೆ TALP ತರಬೇತಿ ನೀಡಬೇಕೆದೆ.

 ತರಬೇತಿಯ ಉದ್ದೇಶಗಳು: NCERT ಯ ICT in educationನ  ಪಠ್ಯ ಕ್ರಮದಲ್ಲಿರುವಂತೆ ಸರ್ಕಾರಿ ಪ್ರೌಢ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿನ 8ರಿಂದ 10ನೇ ತರಗತಿಯವರೆಗೆ ಗಣಕ ಸಾಕ್ಷರತೆಯ ಕಲಿಕೆಯನ್ನು ಖಾತ್ರಿಗೊಳಿಸುವುದು ಮತ್ತು ಎಲ್ಲಾ ವಿಷಯಗಳಲ್ಲಿ ಸಾಮಾನ್ಯ ತರಗತಿ ಬೋಧನೆಗೆ ಮತ್ತು ಕಲಿಕೆಗೆ

ಐ.ಸಿ.ಟಿ. ಆಧಾರಿತ ಬೋಧನೆ ಮತ್ತು ಕಲಿಕೆಯನ್ನು ಪೂರಕಗೊಳಿಸುವುದು. ಬೋಧನಾ ವಿಧಾನವನ್ನು ಉತ್ತಮಪಡಿಸಲು ತಂತ್ರಜ್ಞಾನ ಮತ್ತು e-contentನ ಬಳಕೆ ಮಾಡುವುದು. ಎಂಟು ಮತ್ತು ಅದಕ್ಕೂ ಮೇಲ್ಪಟ್ಟ ತರಗತಿಗಳ ವಿದ್ಯಾರ್ಥಿಗಳು e-contentನ ಬಳಕೆ ಮಾಡುವಂತೆ ಕ್ರಮವಹಿಸಿ ಯೋಜನೆಯನ್ನು ಮುನ್ನಡೆಸುವ ಸಾಮರ್ಥ್ಯಗಳನ್ನು ಶಿಕ್ಷಕರಲ್ಲಿ ಬೆಳೆಸುವುದು. ICT ಆಧಾರಿತ ಕಲಿಕೆಯನ್ನು ಒಳಗೊಂಡಂತೆ ವಿದ್ಯಾರ್ಥಿಗಳ ಕಲಿಕಾ ಸಾಧನೆಗಳ ಜಾಡೀಕರಣ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪರೀಕ್ಷಾ ಸಾಧನೆ ಶೇ.5 ರಷ್ಟು ವೃದ್ದಿಸುವಂತೆ ಕಲಿಕಾ ಸಾಧನದ ವೃದ್ಧಿ ಇವು ಪ್ರಮುಖ ಉದ್ದೇಶಗಳಾಗಿವೆ.

January 20, 2020